ತೋರಿಂಗೈಟ್	-
 ಮಾನೊಕ್ಲೈನಿಕ್ ಗಣದಲ್ಲಿ ಸ್ಫಟಿಕಗೊಳ್ಳುವ ಕ್ಲೋರೈಟ್ ಗುಂಪಿನ ಒಂದು ಖನಿಜ. ಸಾಮಾನ್ಯವಾಗಿ ಮುದ್ದೆಯಂತೆ ಕಾಣುತ್ತದೆ. ಇದಕ್ಕೆ ಹೊಳೆಯುವ ಸೂಕ್ಷ್ಮ ತೆಳು ಪದರಗಳಿವೆ. ಇದರ ಬಣ್ಣ ಆಲಿವಿನ್ ಹಸುರು (ಪಾಚಿ ಹಸುರು).  		  (ಟಿ.ಆರ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ